ಚೆಲ್ಲಿ ಹೋಯಿತು ಉಸಿರು

ಚೆಲ್ಲಿ ಹೋಯಿತು ಉಸಿರು ( ಪರಿಸರ ದಿನದಂದು ಈ ಕವಿತೆ ಬರೆಯಬೇಕಾದ್ದಕ್ಕೆ ವಿಷಾದಿಸುತ್ತ) ವಿಜಯಶ್ರೀ ಹಾಲಾಡಿ ಚೆಲ್ಲಿಹೋಯಿತು ಉಸಿರು…( ಪರಿಸರ ದಿನದಂದು ಈ ಕವಿತೆ ಬರೆಯಬೇಕಾದ್ದಕ್ಕೆ ವಿಷಾದಿಸುತ್ತ) ಗಾಳಿಗೆ ಗಂಧ ತುಂಬುತ್ತಿದ್ದಬಾಗಾಳು ಮರವನ್ನುಈ ಬೆಳಗು ಕಡಿಯಲಾಗಿದೆಮರದ ಮಾಂಸ ರಕ್ತ ಚರ್ಮಚೆಲ್ಲಾಡಿದ ಬೀದಿಯೊಳಗೆಇದೀಗ ತಾನೇ ನಡೆದುಬಂದೆನೆಲದಲ್ಲಿ ಜಜ್ಜಿಹೋದ ಹೂಮೊಗ್ಗು ಎಲೆಗಳ ಕಂಬನಿಕುಡಿಯುತ್ತಾ… ಹಕ್ಕಿ ಕೊರಳಿಗೆ ಕಷಾಯಕುಡಿಸಿದ ಸಂಗಾತಿ ಮರಮಣ್ಣಿನಾಳದ ಕಸುವುಗಳನಕ್ಷತ್ರಗಳಿಗೆ ಅಂಟಿಸಿದಅವಧೂತ ಮರಜೀವಜಂತುಗಳಿಗೆ ಜೀವಜಲಮೊಗೆದ ತಾಯಿಮರಬದುಕಿತ್ತು ಇಲ್ಲೇ ಕಣ್ಣೆದುರಲ್ಲೇಮಾತು ಮೀರಿದಬುದ್ಧಕಾರುಣ್ಯದಂತೆಮಮತೆ ತೋಳುಗಳಂತೆ… ಚೆಲ್ಲಿಹೋಯಿತು ಉಸಿರುಸಾವು ಹೆಪ್ಪುಗಟ್ಟಿದಂತೆ!****** ಬಾಗಾಳು ಮರ– … Continue reading ಚೆಲ್ಲಿ ಹೋಯಿತು ಉಸಿರು